Sunday, December 12, 2010

ಹಾರೋಹಳ್ಳಿಯ ಆ ಮೂಲೆ ದೇಗುಲ

ನದಾಸ್ವರಗಳ ನಾದಾವಿಲ್ಲ,

ವೇದ ಘೋಷಗಳ ಮೊಳಗಿಲ್ಲ,

ಆಸೆಬುರುಕ ಭಕ್ತರ ಸಾಲಿಲ್ಲ,

ದಕ್ಷಿಣೆಯ ದಾಕ್ಷಿಣ್ಯ ಇಲ್ಲ

ಹಾರೋಹಳ್ಳಿಯ ಆ ಮೂಲೆ ದೇಗುಲ !

ಸುಪ್ತ ಮನಗಳ ಇಂಗಿತ ಅರಿತಂತಿದೆ ಆ ದೇಗುಲ

ನಿರ್ಲಿಪ್ತೆಯ ವಸ್ತ್ರ ಧರಿಸಿದ್ದಾನೆ ಆ ದೇಗುಲದ ಒಡೆಯ

ಶಾಂತ ಪ್ರಶಂತತ್ಯಲ್ಲಿ ಬದುಕು ಉಳಿದಿದ್ದಾನೆ ಆ ದೇಗುಲದ ಒಡೆಯ

ನಮ್ಮೆಲರನ್ನು ಬಿಟ್ಟು, ಸ್ವಾರ್ಥದ ಹಾಡಿಗೆ ಮುಖಗೊಟ್ಟು ಮಲಗಿದ್ದಾನೆ…



ದೇವರು: "ನಿಮ್ಮ ತಪ್ಪುಗಳ ಸರೆಮಾಲೆಗಳ ಬೇತಾಳ ಬೇಡ

ಸಾಕಪ್ಪ ಸಾಕು, ನೊಂದ ಕಣ್ಣಿರಿನ ಹೊಳೆ ಒರಸಿ,

ಬೀಳುವ, ಏಳಲಾಗದಿರುವ ಮೌಲ್ಯ ತಕ್ಕಡಿಯ ಅಳತೆ ಬೇಡ,

ಹರಕೆ ತಿರಿಸಲಾಗದ ಹೊಣೆಗಾರಿಕೆಯು ಬೇಡ,

ಮುಖವಾಡ ಹೊತ್ತ ತೆನಾಲಿ ರಾಮಾರೂ ಬೇಡ,

ನರಭಕ್ಷಕರ ರಕ್ತ ಕೊಡಿ ಬೇಡ,

ಕಾವೇರಿಯ "ಕಾ" ವೇರುವ ವಾಗ್ವಾದ ಬೇಡ,

"ತಾಜ್" ವಿನ ಭಯ ವೈಭವೂ ಬೇಡ,

ಮುಘ್ಧತೆಯ ಹತ್ಯೆಯೂ ಬೇಡ,



ನಾನು ನಿಮ್ಮಂತೆ ಬದುಕು ಉಳಿಯುತ್ತೇನೆ ,

ನಾನು ಮತ್ತು ನನ್ನ ಮನೆ "ಇವಿಷ್ಟೇ ಸಾಕು"

No comments:

Post a Comment