Wednesday, June 9, 2010

wants

ಬೇಕು

ಅಳಿದ ಉಳಿದ ಬಸವಳಿದ ದೇಹವೆಂಬ ಮನಸ್ಸಿಗೆ ಶಾಂತಿ ಬೇಕು,

ಮೈಲಿ ದೂರ ನಡೆಯದೆ, ಮೇಲೆಕ್ಕೆರಲೂ ಆಗದಿರುವ ಸೋತ ಕಾಲಿನಂತಹ ಜೀವಕ್ಕೆ,

ಚೈತನ್ಯ ಬೇಕು,

ಮನಸ್ಸು ರೆಕ್ಕೆಗೆದರಿ ಹಾರಲು

ತನ್ನದೇ ಆಕಾಶ ಬೇಕು

ಖಾಲಿ ಜೇಬೀನೋಳಗಿರುವ ನಗುವ ಅಟ್ಟಹಾಸಕ್ಕೆ, ಅದು ಬೇಕು, ಇದು ಬೇಕು,

ಎಂಬ ಕಾಂಚಾಣ ಬೇಕು,

ಹೊಟ್ಟೆಯ ಹಾಹಾಕಾರದ ಹಸಿವು ತಣಿಸಲು

ಒಂದು ತುತ್ತು ಅನ್ನ ಬೇಕು

ನೂರೊಂದು ಬೇಕುಗಳ ನಡುವೆ ಸದೃಶವಾಗಿ ಕಾಣುತ್ತಿರುವುದು

ಆ 'ಬೇಡವೇ' ಹೊರತು

'ಬೇಕು' ಅಲ್ಲ !

ಈ "ಬೇಕು" ಬೇಡಗಳ ಜುಜಾಟದಲ್ಲಿ,

ಬೇಕೇ ಬೇಕು " ಈ ಬೇಕುಗಳು", "ಆ ಬೇಕುಗಳು"